News Cafe | Bengaluru: Steel Bridge Inauguration Postponed | HR Ranganath | Aug 10, 2022

2022-08-10 5

ರಾಜ್ಯದ ಮೊದಲ ಸ್ಟೀಲ್ ಬ್ರಿಡ್ಜ್‍ಗೆ ಆದ್ಯಾಕೋ ಏನೋ ಓಪನ್ ಆಗುವ ಭಾಗ್ಯವೇ ಸಿಗುತ್ತಿಲ್ಲ. ಇದೇ ಆಗಸ್ಟ್ 15ರ ಸ್ವಾತಂತ್ರೋತ್ಸವಕ್ಕೆ ಉದ್ಘಾಟನೆಗೊಳ್ಳಬೇಕಿದ್ದ ಶಿವಾನಂದ ಸರ್ಕಲ್ ಬಳಿಯ ಉಕ್ಕಿನ ಸೇತುವೆಗೆ ಮತ್ತೆ ವಿಘ್ನ ಎದುರಾಗಿದೆ. ಕಳೆದ 5 ವರ್ಷಗಳಿಂದ ನಗರದ ಶಿವಾನಂದ ಸರ್ಕಲ್ ಬಳಿ ಇರುವ ಸ್ಟೀಲ್ ಬ್ರೀಡ್ಜ್ ಹಲವು ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಸುಮಾರು 40 ಕೋಟಿ ಅಂದಾಜು ವೆಚ್ಚದಲ್ಲಿ ಸಿದ್ಧವಾಗಿರುವ ಮೇಲ್ಸೇತುವೆ ಮೂರು ಸಿಎಂಗಳು ಬಂದು ಹೋದರೂ ಓಪನ್ ಆಗಿರಲ್ಲಿಲ್ಲ. ಕೆಲ ಕಾನೂನಾತ್ಮಕ ತೊಡಕಿನಿಂದ ಕಳೆದ 5 ವರ್ಷಗಳಿಂದ ಕಾಮಗಾರಿ ಅರ್ಧಕ್ಕೆ ನಿಂತ್ತಿತ್ತು. ಆದರೆ ಹೈಕೋರ್ಟ್ ಅಡೆತಡೆಗಳೆಲ್ಲದಕ್ಕೂ ಮುಕ್ತಿ ನೀಡಿತ್ತು. ನ್ಯಾಯಾಲಯದ ಅದೇಶದಂತೆ ಬ್ರಿಡ್ಜ್ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುವು ನೀಡಲು ಬಿಬಿಎಂಪಿ ಕೂಡ ತಯಾರಿ ಮಾಡಿತ್ತು. ಆಗಸ್ಟ್ 15ರ ಸ್ವಾತಂತ್ರೋತ್ಸವಕ್ಕೆ ಉದ್ಘಾಟನೆಗೊಳ್ಳಬೇಕಿದ್ದ ಉಕ್ಕಿನ ಸೇತುವೆಗೆ ಮತ್ತೆ ವಿಘ್ನ ಎದುರಾಗಿದೆ. ಕಾರಣ, ಬ್ರಿಡ್ಜ್ ಮುಂಭಾಗ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿಯಿಂದ ಸ್ಟೀಲ್ ಬ್ರಿಡ್ಜ್ ಉದ್ಘಾಟನೆ ಮತ್ತು ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಫ್ಲೈ ಓವರ್‍ನಿಂದ ಕೆಳಗಿಳಿಯುವ ಮಾರ್ಗದಲ್ಲೆ ರಾಜಕಾಲುವೆ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಮುಕ್ತಾಯವಾಗುವರೆಗೂ ಸ್ಟೀಲ್ ಬ್ರಿಡ್ಜ್ ಉದ್ಘಾಟನೆ ಮುಂದೂಡಲೇ ಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.

#publictv #newscafe #hrranganath

Free Traffic Exchange